ರಾಬರ್ಟ್, ಹ್ಯಾರಿ ಲೋವಿ 1883 - 1957.  ಅಮೆರಿಕ ಸಂಯುಕ್ತ ಸಂಸ್ಥಾನದ ಪ್ರಸಿದ್ಧ ಮಾನವಶಾಸ್ತ್ರಜ್ಞ. ಈತ ಆಸ್ಟ್ರಿಯದ ರಾಜಧಾನಿ ವಿಯೆನ್ನದಲ್ಲಿ ಜನಿಸಿದ. ಇವನ ಪ್ರಾಥಮಿಕ, ಮಾಧ್ಯಮಿಕ ಮತ್ತು ಕಾಲೇಜು ಶಿಕ್ಷಣ ನ್ಯೂಯಾರ್ಕ್ ನಗರದಲ್ಲಿ ನಡೆಯಿತು. ಸುಪ್ರಸಿದ್ಧ ಮಾನವಶಾಸ್ತ್ರಜ್ಞ ಫ್ರಾಂಜ್ ಬೋಡ ಆಸ್‍ನ ನೆಚ್ಚಿನ ವಿದ್ಯಾರ್ಥಿಯಾಗಿ ಮಾನವಶಾಸ್ತ್ರವನ್ನು ಅಧ್ಯಯನ ಮಾಡಿ ಕೊಲಂಬಿಯ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದ. ಅನಂತರ ಅಮೆರಿಕದ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಲ್ಲಿ ಸೇವೆಗೆ ಸೇರಿದ. ಇಲ್ಲಿ ಈತನಿಗೆ ಕ್ಲಾರ್ಕ್ ವಿಸ್ಲರ್‍ನ ಮಾರ್ಗದರ್ಶನ ಲಭಿಸಿತು. (1907 - 17). ಅವನ ಮಾರ್ಗದರ್ಶನದಲ್ಲಿ ಈತ ಸಂಶೋಧನ ಕ್ಷೇತ್ರಕಾರ್ಯ ಕೈಗೊಂಡು, ಪ್ರಥಮ ಬಾರಿಗೆ ಅಮೆರಿಕದ ಲೆಹ್ಮಿಶೋಷೇನ್ ಎಂಬ ಪ್ರದೇಶದಲ್ಲಿ ಕ್ಷೇತ್ರಕಾರ್ಯ ನಡೆಸಿದ. ಬೋಅಸರ ಮಾರ್ಗದರ್ಶನದಲ್ಲಿ ಈತ ರಚಿಸಿದ ಕಂಪಾರೆಟಿವ್ ಸ್ಟಡಿ ಆಫ್ ಮೈಥಾಲಜಿ ಎಂಬ ಪ್ರೌಢಪ್ರಬಂಧಕ್ಕೆ ಕೊಲಂಬಿಯ ವಿಶ್ವವಿದ್ಯಾಲಯ ಡಾಕ್ಟೊರೇಟ್ ಪದವಿ ನೀಡಿತು (1908). ಅಮೆರಿಕದ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಮತ್ತು ಕ್ಯಾಲಿಪೋರ್ನಿಯ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕನಾಗಿದ್ದಾಗ ಲುಲ್ಲ ಕೋಲಿ ಎಂಬ ಮನಶಾಸ್ತ್ರಜ್ಞಳನ್ನು ವಿವಾಹವಾದ (ಈಕೆ ತನ್ನ ಕೊನೆಯ ದಿನಗಳನ್ನು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಳಾಗಿ ಕಳೆದಳು).

ಮನುಕುಲಶಾಸ್ತ್ರಕ್ಕೆ ಸಂಬಂಧಿಸಿದಂತೆ ಲೋವಿ ನಾನೂರಕ್ಕೂ ಹೆಚ್ಚು ಸಂಶೋಧನಾತ್ಮಕ ಲೇಖನಗಳನ್ನು ಪ್ರಕಟಿಸಿದ್ದಾನೆ. 14 ಗ್ರಂಥಗಳನ್ನೂ 18 ಏಕಸಂಸ್ಕøತಿಯ ವಿಶ್ಲೇಷಣಾ ಅಧ್ಯಯನಗಳನ್ನೂ (ಮಾನೋಗ್ರಾಫ್ಸ್) ಪ್ರಕಟಿಸಿದ್ದಾನೆ. ಲೋವಿ ಮಾನವನಶಾಸ್ತ್ರ ಕ್ಷೇತ್ರದಲ್ಲಿ `ಸಂಸ್ಕøತಿ ಪ್ರಸರಣವಾದದ ಪ್ರತಿಪಾದಕರ ಗುಂಪಿಗೆ ಸೇರಿದವನಾಗಿದ್ದು, ಮಾಜಗಳ ಸಂಸ್ಕøತಿಯು ಇತರೇ ಸಂಸ್ಕøತಿಯ ಪ್ರಸರಣದಿಂದ ಅಭಿವೃದ್ಧಿಯತ್ತ ಸಾಗಿದೆ ಎಂಬುದನ್ನು ಅನೇಕ ಅಧ್ಯಯನಗಳ ಸಾಕ್ಷ್ಯಾಧಾರವನ್ನು ನೀಡಿ ಪ್ರತಿಪಾದಿಸಿದ. ಸಂಸ್ಕøತಿಯ ಪ್ರಸರಣದಲ್ಲಿ ಸಂಸ್ಕøತಿಯ ಪ್ರಸರಣದಲ್ಲಿ ಸಂಸ್ಕøತಿಯ ಕೇಂದ್ರಗಳು ಪ್ರಮುಖ ಪಾತ್ರವಹಿಸಿದೆ ಎಂಬುದನ್ನು ಈತ ಅಧ್ಯಯನಗಳಲ್ಲಿ ವ್ಯಕ್ತಿಪಡಿಸಿದ್ದಾನೆ. 19 ನೆಯ ಶತಮಾನದ ಏಕಮುಖ ಸಮಾಜ ಸಂಘಟನೆಗಳ ವಿಕಾಸವಾದವು ಆಧಾರಗಳನ್ನು ಹೆಚ್ಚಾಗಿ ಹೊಂದಿಲ್ಲ ಎಂಬ ಕಾರಣಕ್ಕಾಗಿ ಅವುಗಳನ್ನು ತಿರಸ್ಕರಿಸಿ ಸಂಸ್ಕøತಿಯ ಬೆಳೆವಣಿಗೆಗಳು ಪ್ರಸರಣದಿಂದಲೇ ಪ್ರಗತಿ ಹೊಂದಿವೆ ಎನ್ನುವುದನ್ನು ಅನೇಕ ಉದಾಹರಣೆಗಳನ್ನು ನೀಡಿ ಈತ ಸಮರ್ಥಿಸಿದ. ಲೋವಿ ತನ್ನ ಅಧ್ಯಯನದಲ್ಲಿ ಕ್ರೊಬರ್‍ನ ಐತಿಹಾಸಿಕ ಅಧ್ಯಯನ ವಿಧಾನ ಮತ್ತು ರಾಡ್‍ಕ್ಲಿಪ್ ಬ್ರೌನ್‍ನ ರಚನಾತ್ಮಕ ಮತ್ತು ಕ್ರಿಯಾತ್ಮಕ ವಿಧಾನಗಳನ್ನು ಅನುಸರಿಸಿದ್ದಾನೆ. ಪ್ರಿಮಿಟಿವ್ ಸೊಸೈಟಿ (1920), ಪ್ರಿಮಿಟಿವ್ ರಿಲಿಜನ್ (1924), ದಿ ಅರಿಜನ್ ಆಫ್ ಸ್ಟೇಟ್ (1927), ಇನ್‍ಟ್ರೊಡಕ್ಷನ್ ಟು ಅಂಥ್ರೋಪಾಲಜಿ (1934), ದಿ ಹಿಸ್ಟರಿ ಆಫ್ ಎತ್ನೋಲಾಜಿಕಲ್ ಥಿಯರಿ (1937), ದಿ ಕ್ರೊ ಅಂಡರ್‍ಸ್ಟಾಂಡಿಂಗ್ ಜರ್ಮನಿ (2954) ಇವು ಇವನ ಮುಖ್ಯ ಕೃತಿಗಳು.

ಈತನ ಪ್ರಕಾರ ಅಲಿಖಿತ ಸಂಪ್ರದಾಯವನ್ನು ಒಪ್ಪಲಾಗದು. ಹಾಗಾಗಿ ಒಪ್ಪುವಂತಹ ಲಿಖಿತ ಸಂಪ್ರದಾಯದ ಇತಿಹಾಸವನ್ನು ಮನುಕುಲಶಾಸ್ತ್ರಜ್ಞರು, ಪುರಾತತ್ತ್ವಶಾಸ್ತ್ರಜ್ಞರು, ಭಾಷಾಶಾಸ್ತ್ರಜ್ಞರು ಮತ್ತು ಶಾರೀರಿಕ ಮಾನವ ಶಾಸ್ತ್ರಜ್ಞರು ಹೆಚ್ಚು ಜವಾಬ್ದಾರಿಯುತವಾಗಿ ಸಂಶೋಧಿಸಬೇಕೆಂದು ಕರೆಕೊಟ್ಟ. ಎಲ್ಲ ಜನಾಂಗಗಳೂ ಒಂದೇ ಎಂಬ ವಾದವನ್ನು ಈತ ನಿರಾಕರಿಸಿದ. e್ಞÁನದ ಸಂಸ್ಕøತಿಯ, ಸಾಮಾಜಿಕ ಸಂಘಟನೆಗಳ ಬೆಳೆವಣಿಗೆಗಳಲ್ಲಿ ವೈವಿದ್ಯತೆಗಳು ಕಂಡುಬರುತ್ತವೆ ಎಂಬ ಅಭಿಪ್ರಾಯವನ್ನು ಈತ ತಾಳಿದ್ದ. ಬಂಧುತ್ವ ಪದಶಾಸ್ತ್ರದ ಅಧ್ಯಯನವನ್ನು ಐತಿಹಾಸಿಕ ಮತ್ತು ಸಮಾಜಶಾಸ್ತ್ರೀಯ ದೃಷ್ಟಿಕೋನದಿಂದ ಅಧ್ಯಯನ ಮಾಡಬೇಕು ಮತ್ತು ಅಡ್ಡ ಸಂಸ್ಕøತಿಯ ಬಂಧುತ್ವ ಪದಗಳನ್ನು ತೌಲನಿಕವಾಗಿ (ಕ್ರಾಸ್ ಕಲ್ಚರಲ್ ಕಿನ್‍ಷಿಪ್ ಕಂಪಾರೆಟಿವ್ ಸ್ಟಡಿ) ಅಧ್ಯಯನ ಮಾಡಬೇಕು ಎಂದೂ ಹೇಳಿದ. ಷಿಕಾಗೊ ವಿಶ್ವವಿದ್ಯಾಲಯ ಇವನಿಗೆ ಗೌರವ ಡಾಕ್ಟೊರೇಟ್ ಪದವಿ ನೀಡಿ ಗೌರವಿಸಿದೆ. ಈತನಿಗೆ ಅನೇಕ ಬಹುಮಾನ, ಪ್ರಶಸ್ತಿಗಳು ಲಭ್ಯವಾಗಿದ್ದ ಇವುಗಳಲ್ಲಿ ವೈಕಿಂಗ್ ಪ್ರಶಸ್ತಿಯೂ ಒಂದು.   				     
(ಎನ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ